“ನಮ್ಮ ನೋವು, ಅವಮಾನಗಳು ಅಂಬೇಡ್ಕರ್‍ವರಿಗೆ ಕಂಡಂತೆ ಅವರ ನೋವುಗಳೇಕೆ ನಮಗೆ ಕಾಣುತ್ತಿಲ್ಲ?”

Chaithra M G

chaithra

ಹಿಂದೂ ಸಮಾಜದ ವ್ಯವಸ್ಥೆಯಲ್ಲಿ ಅತ್ಯಂತ ತಳಭಾಗದಲ್ಲಿರುವುದೇ ಕೆಳಸಮುದಾಯಗಳು ಶತಶತಮಾನಗಳಿಂದಲೂ ಈ ಸಮುದಾಯಗಳು ಸವರ್ಣೀಯರಿಂದ ಅಸ್ಪøಶ್ಯ ಎಂದು ಪರಿಗಣಿಸಲ್ಪಟ್ಟಿವೆ. ಇಂತಹ ತಳ ಸಮುದಾಯದಲ್ಲಿ ಹುಟ್ಟಿ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಅಸಹ್ಯ ಅಸ್ಪøಶ್ಯ ಪದ್ಧತಿಗಳಿಂದ ನಲುಗಿ ಹೋಗಿರುವವರಲ್ಲಿ ನಾನು ಕೂಡ ಒಬ್ಬಳು.

ಅಸ್ಪಶ್ಯ ಸಮಾದಾಯಗಳ ವಿವೋಚನೆಗಾಗಿ ಅಜೀವ ಪರ್ಯಂತ ಹೋರಾಡಿದ ಧೀಮಂತ ಅಂಬ್ಕೇಡರ್ ಸ್ವತಂತ್ರ ಭಾರತದ ಸಂವಿಧಾನವನ್ನು ರಚಿಸಿ ಅದನ್ನು ಸಮಗ್ರ ದೇಶ ಒಪ್ಪಿಕೊಂಡು ಅದಕ್ಕೆ ಬದ್ಧತೆಯನ್ನು ಘೋಷಿಸಿದ್ದರೂ ಸಹಸ್ರಮಾನಗಳ ನಾಚಿಕೆಗೇಡಿ ಚರಿತ್ರೆ ಇರುವ ಈ ಜಾತಿಪದ್ಧತಿ ಎನ್ನುವ ಮತ್ತು ಅದರ ಲಕ್ಷಣಗಳು ಮಾತ್ರ ಇಂದಿಗೂ ಸಂಪೂರ್ಣವಾಗಿ ಸಮಾಜದಲ್ಲಿ ನಿರ್ಮಾಲನೆಯಾಗಿಲ್ಲ ಇಂತಹ ಸಮಾಜದ ಒಂದು ಭಾಗದಲ್ಲಿ ನನ್ನ ಊರು ಕೂಡ ಒಂದು.

ನನ್ನ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಯಾವ ರೀತಿಯ ಘನಘೋರ ಆಚರಣೆಗಳು ಆಚರಣೆಯಲ್ಲಿದ್ದವೋ ಆ ಆಚರಣೆಗಳು ನಾನು ಉನ್ನತ ಶಿಕ್ಷಣ ವ್ಯಾಸಂಗ ಮುಗಿಸಿದರೂ ನಮ್ಮ ಊರಿನಲ್ಲಿ ಈ ನಾಚಿಕೆಗೇಡಿನ ಆಚರಣೆಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂಬುದು ವಿಷಾದನೀಯ.

ಮಾಧ್ಯಮಿಕ ಹಂತದವರೆಗೂ ಈ ಆಚರಣೆಗಳ ಬಗ್ಗೆ ಯಾವುದೇ ಪ್ರಶ್ನೆ ಕೇಳಿದರೂ ದೇವರ ನಿಯಮಗಳು ಎಂದಷ್ಟೇ ಉತ್ತರ ದೊರೆಯುತ್ತಿತ್ತು. ಆದರೆ ನಂತರದ ಹಂತದಲ್ಲಿ ಈ ಆಚರಣೆಗಳನ್ನು ಧಿಕ್ಕರಿಸುವ ನಮ್ಮ ತಾಯಿಯ ದಿಟ್ಟತನವನ್ನು ನೋಡಿ ಈ ಅಸ್ಪøತೆಯನ್ನು ವಿರೋಧಿಸಲಾರಂಭಿಸಿದೆ. ಇದಕ್ಕೆ ಒಂದು ದೃಷ್ಟಾಂತವೆಂದರೆ ನಮ್ಮ ಊರಿನ ಈಶ್ವರ ದೇವಾಲಯಕ್ಕೆ ಹಿಂದಿನಿಂದಲೂ ಮತ್ತು ಇಂದಿನವರೆಗೂ ಕೆಳ ಸಮುದಾಯದವರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಈ ದೇವಾಲಯಕ್ಕೆ ಪ್ರವೇಶ ಮಾಡಿದೆ ಇದಕ್ಕೆ ನಮ್ಮ ಅಮ್ಮನ್ನೇ ಸ್ಪೂರ್ತಿ. ನಮ್ಮ ಅಮ್ಮ ಅನಕ್ಷರಸ್ಥೆಯಾಗಿದ್ದರೂ ಈ ಮೂಢನಂಬಿಕೆ ಮತ್ತು ಕಟ್ಟುಪಾಡುಗಳನ್ನು ಕಿತ್ತೊಗೆಯುತ್ತಿದ್ದರು. ನಮ್ಮ ಊರಿನ ಕೆರೆಯ ನೀರನ್ನ ಕೆಳಜಾತಿಯವರು ಮುಟ್ಟುವಂತಿರಲಿಲ್ಲ. ಆದರೆ ನಮ್ಮ ತಾಯಿ ಬಹುವರ್ಷಗಳಿಂದ ಇದ್ದಂತಹ ಕಟ್ಟುಪಾಡನ್ನು ಧಿಕ್ಕರಿಸಿ, ನೀರನ್ನು ಮುಟ್ಟಿ ಯಾಕೆ ಉಪಯೋಗಿಸಬಾರದು? ಎಂಬ ಪ್ರಶ್ನೆ ಹಾಕಿ ಊರಿನ ಪ್ರಮುಖರೆನಿಸಿಕೊಂಡ ಎಲ್ಲಾ ವ್ಯಕ್ತಿಗಳ ಪ್ರಶ್ನೆಗಳಿಗೆ ಸರಿಯಾದ ಪ್ರತ್ಯತ್ತರ ನೀಡಿದ್ದರು. ಇವೆಲ್ಲಾ ನನ್ನ ಪಿ.ಯು.ಸಿ. ವರೆಗೆ ನಡೆದ ಘನೆಗಳು.

ನಂತರ ನಾನು ಡಿ.ಇಡ್ ಮುಗಿಸಿ ಶಿಕ್ಷಕಿಯಾಗಿ ಶಾಲೆಯೊಂದಕ್ಕೆ ಹೋದಾಗ ಇಲ್ಲಾದ ಅಸ್ಪøಶ್ಯತನ ಅನುಭವವನ್ನು ಹೇಳಲು ಇಚ್ಚಿಸುತ್ತೇನೆ.

ಅಲ್ಲಿಯ ಶಿಕ್ಷಕಿಯೊಬ್ಬರು ತನಗೆ ಪ್ರಾರಂಭದಲ್ಲಿಯೇ ಆತ್ಮೀಯರಾದರು. ಅವರೂ ಕೂಡ ನನ್ನ ಜಾತಿಯ ಬಗ್ಗೆ ಎಂದಿಗೂ ಕೇಳಲಿಲ್ಲ ಹಾಗೆಯೇ ನನಗೂ ಕೂಡ ನನ್ನ ಜಾತಿ ಹೇಳುವ ಪ್ರಮೇಯವೇ ಬರಲಿಲ್ಲ. ಅವರ ಮನೆ ಅದೇ ಊರಿನಲ್ಲಿ ಇದ್ದುದರಿಂದ ನನ್ನನ್ನು ಹಲವಾರು ಬಾರಿ ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ಆನಂತರ ನಾನು ಎಲ್.ಎಲ್.ಬಿ. ಪದವಿಗೆ ಬೆಂಗಳೂರಿಗೆ ತೆರಳಬೇಕಾಗಿ ಬಂದಿದ್ದರಿಂದ ನಾನು ಆ ಶಾಲೆಯನ್ನು ಬಿಡಬೇಕಾದ ಪ್ರಸಂಗ ಬಂದಿತು. ಇಂತಹ ಸಮಯದಲ್ಲಿ ಮತ್ತೊಬ್ಬ ಶಿಕ್ಷಕಿಯ ಸೇರ್ಪಡೆಯಾಯಿತು. ಈ ಶಿಕ್ಷಕಿ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರು. ಇವರ ಜಾತಿಯ ಬಗ್ಗೆ ನನಗೆ ಆತ್ಮೀಯರಾದ ಮೇಲು ಜಾತಿಯ ಶಿಕ್ಷಕಿಯು ನನ್ನ ಬಳಿ ಬಂದು ಹೊಸದಾಗಿ ಬಂದಿರುವ ಶಿಕ್ಷಕಿಯು ಕೆಳ ಜಾತಿಗೆ ಸೇರಿದವರು ಇವರು ಯಾಕಾದರೂ ನಮ್ಮ ಶಾಲೆಗೆ ಸೇರ್ಪಡೆಯಾದರು ಎಂದು ಹೇಳಿದಾಗಲೇ ನನಗೆ ತಿಳಿದದ್ದು ನನ್ನ ಜಾತಿ ಅವರಿಗೆ ತಿಳಿದಿಲ್ಲ ಹಾಗೂ ಅವರು ಮೇಲು ಜಾತಿಗೆ ಸೇರಿದವರೆಂದು, ನಾನು ತಕ್ಷಣೆವೇ ನಾನೂ ಕೂಡ ದಲಿತ ಜಾತಿಯವಳೇ ಎಂದು ಹೇಳಿದಾಗ ಅವರು ನೀಡದ ಪ್ರತಿಕ್ರಿಯೆ ಏನೆಂದರೆ ನೀವು ನಮ್ಮ ಮನೆಗೆಲ್ಲಾ ಬಂದಿದ್ಧೀರ ಮೊದಲೇ ಹೇೀಳೋದಲ್ವಾ ನಿಮ್ಮ ಜಾತಿ ಬಗ್ಗೆ ಎಂದು ಹೊರನಡೆದರು.

ಈ ಘಟನೆ ನನ್ನನ್ನು ತುಂಬಾ ಕಾಡಿತು. ಶಿಕ್ಷಕಿಯಾಗಿ ಮಕ್ಕಳಿಗೆ ಸಮಾನತೆ, ಸೋದರತೆ ಎಂದು ಪಾಠ ಹೇಳಬೇಕಾದ ಇವರೇ ಇಂತಹ ಅಘೋರ ಮನಸ್ಸು ತಾಳಿ ಅಸ್ಪøಶ್ಯತೆ ಗಿಡಕ್ಕೆ ನೀರೆರೆದರೆ ಸಮಾನತೆ ಮತ್ತೆ ಜಾತಿವಿನಾಶದ ಮಾತೆಲ್ಲಿ? ಎನ್ನುವ ಇನ್ನೂ ಅದೆಷ್ಟೋ ಪ್ರಶ್ನೆಗಳು ಮನಸ್ಸಿಗೆ ಬಂದವು.

ಆದರೆ ಈ ಮುಂದಿನ ಹಂತ ನನ್ನ ಜೀವನದಲ್ಲಿ ಬಹುಮುಖ್ಯ ಹಂತ ಎಂದೇ ಹೇಳಬಹುದು. ನನ್ನ ಕಾನೂನೂ ಪದವಿ ಪಡೆಯಲು ಬೆಂಗಳೂರಿಗೆ ತೆರಳಿದನು. ಮತ್ತೊಂದು ಪ್ರಮುಖ ವಿಷಯ ಎಂದರೆ ನಮ್ಮ ಊರಿನ ದಲಿತ ಸಮುದಾಯದಲ್ಲಿ ಪದವಿ ಪಡೆದ ಮೊದಲ ವ್ಯಕ್ತಿ ಎಂದರೆ ನಾನೇ. ಹಾಗೆಯೇ ಸ್ನಾತಕೋತ್ತರ ಪದವಿ ಪಡೆಯಲು ವಿಶ್ವವಿದ್ಯಾಲಯ ಮಟ್ಟಕ್ಕೆ ಬಂದವಳಲ್ಲಿ ಕೂಡ ಮೊದಲಿಗಳೂ ನಾನೇ.

ಇಲ್ಲಿಯವರೆಗೆ ಮಹಾನ್ ಅಂಬೇಡ್ಕರ್ ದಲಿತ ಸಮುದಾಯಗಳಿಗೆ ದುಡಿದಿದ್ದಾರೆ. ಸಂವಿಧಾನ ರಚನಾಕಾರರರು ಎಂದಷ್ಟೇ ತಿಳಿದಿತ್ತು. ಆದರೆ ಇವರ ಬಗ್ಗೆ ತಿಳಿದುಕೊಳ್ಳುವುದು ಎಷ್ಟಿಗೆ ಎಂಬುದನ್ನು ನಾನು ಇಲ್ಲಿ ಅರಿತೆ. ನನ್ನ ಕಾನೂನು ಪದವಿ ಜೊತೆಗೆ      ಅಂಬೇಡ್ಕೆರ್‍ರವರ ಬಗ್ಗೆ ಓದಲು ಆರಂಭಿಸಿದಾಗ ಶೋಷಿತ ಸಮುದಾಯದವರ ನಾಲಿಗೆಯ ಮೇಲೆ ಅಕ್ಷರವನ್ನು ಕೆತ್ತಲು ಎಷ್ಟೆಲ್ಲಾ ಕಷ್ಟ-ಕಾರ್ಪಣ್ಯಗಳನ್ನು, ಸಾವು-ನೋವುಗಳನ್ನು ಅನುಭವಿಸಿದ್ದಾರೆ ಎಂದು ತಿಳಿದಾಗ, ಕಣ್ಣಲ್ಲಿ ತಾನಾಗಿಯೇ ನೀರು ಹರಿದಿತ್ತು. ಅವರ ಪಾತ್ರವೇನಾದರೂ ನಮ್ಮ ಜೀವನದಲ್ಲಿ ಇಲ್ಲದಿದ್ದರೆ ಎಂದು ಬಂದು ಬಾರಿ ಊಹಿಸಿಕೊಂಡಾಗ ಜೀವನ ಶೂನ್ಯ ಎನಿಸಿತು. ಅವರೇನಾದರೂ ತನ್ನ ಸಮುದಾಯಗಳಿಗೋಸ್ಕರ ಕ್ರಮವಹಿಸದಿದ್ದಲ್ಲಿ ನನ್ನ ತಂದೆ-ತಾಯಿ ಅಂದು ಜೀತ ಮಾಡಿ ಅನುಭವಿಸಿದ ಕಷ್ಟಗಳನ್ನು ನಾನು ಇಂದಿಗೂ ಅನುಭವಿಸಬೇಕಾಗಬೇಕಿತ್ತು. ಈ ದೇಶದ ಶೋಷಿತ ಸಮುದಾಯದವರ ಸ್ಥಿತಿ ಇನ್ನೇಷ್ಟು ಹೀನಾಯ ಸ್ಥಿತಿಯಲ್ಲಿರುತ್ತಿತ್ತೋ ಎಂದು ಊಹಿಸಿಕೊಳ್ಳಲು ಕಟ್ಷವಾಗುತ್ತದೆ.

ನನ್ನ ಕಾನೂನು ಪದವಿಯ ಸಂದರ್ಭದಲ್ಲಿ ನನ್ನ ದೊಡ್ಡಪ್ಪನ ಮಗನ ಮದುವೆ ಇತ್ತು. ನನ್ನ ದೊಡ್ಡಪ್ಪನ ಮಗನ ಮದುವೆಯ ದಿನದಂದು ದೇವಸ್ಥಾನಕ್ಕೆ ಪೂಜೆಗಾಗಿ ತೆರಳುತ್ತಿದ್ದರು. ಇಷ್ಟೋತ್ತಿಗಾಗಲೇ ದೈವತ್ವ ಕುರಿತಂತೆ ವಾಸ್ತವತೆ ಅರ್ಥವಾಗಿದ್ದ ನನು ದೇವಸ್ಥಾನಕ್ಕೆ ಹೋಗಲು ನಿರಾಕರಿಸಿದರೂ, ಒತ್ತಾಯ ಮಾಡಿ ಕರೆದೊಯ್ದರು. ನಮ್ಮ ಊರಿನಲ್ಲಿ ಹಲವಾರು ದೇವಸ್ಥಾನಗಳಿವೆ. ಅದರಲ್ಲೊಂದು ಆಂಜನೇಯ ದೇವಸ್ಥಾನ.

ಈ ದೇವಸ್ಥಾನಕ್ಕೆ ಪೂಜಾ ಸಾಮಾನುಗಳೊಂದಿಗೆ ತೆರಳಿದಾಗ ಅಸ್ಪøಶ್ಯರು ದೇವಸ್ಥಾನದ ಬಹು ದೂರದಲ್ಲಿಯೇ ನಿಲ್ಲಬೇಕಾದ ಪದ್ಧತಿಯಿದೆ ಎಂದು ನನಗೆ ತಿಳಿದು ಬಂತು. ದೇವಸ್ಥಾನದ ಹೊರಗೆ ಒಂದು ಕಲ್ಲು ಇದೆ ಆ ಕಲ್ಲಿನ ಮೇಲೆ ಕೇಳ ಜಾತಿಯವರು ಪೂಜಾ ಸಾಮಾನುಗಳನ್ನಿಡಬೇಕು, ನಂತರ ಪೂಜಾರಿಯು ಮೈಲಿಗೆ ಎಂದು ಅದೇನೋ ಪ್ರೇಕ್ಷಿಸಿ ಪೂಜಾ ಸಾಮಾನುಗಳನ್ನು ತೆಗೆದುಕೊಂಡನು. ಆದರೆ ಪೂಜಾ ಸಾಮಾನುಗಳನ್ನು ತೆಗೆದುಕೊಂದು ಹೋಗಿದ್ದ ಪೂಜಾ ತಟ್ಟೆಯನ್ನು ಮುಟ್ಟಲಿಲ್ಲ. ನಂತರ ಪೂಜೆ ಮುಗಿಸಿ ಮಂಗಳಾರತಿ ಮತ್ತು ಕುಂಕುಮ ತೆಗೆದುಕೊಂಡು ಹೊರಬಂದು ಬಹುದೂರದಿಂದಲೇ ಮಂಗಳಾರತಿ ತೆಗೆದುಕೊಳ್ಳುವಂತೆ ಆಜ್ಞೆ ಮಾಡಿದ ಮತ್ತು ಕುಂಕುಮ ಹೂವನ್ನು ಅಲ್ಲೊಂದು ಕಲ್ಲಿನ ಮೇಲಿಟ್ಟು ತೆಗೆದುಕೊಳ್ಳಲು ಹೇಳಿದ. ಇವೆಲ್ಲವನ್ನು ದೂರದಿಂದಲೇ ನೊಡುತ್ತಾ ನಿಂತಿದ್ದ ನಾನು ಇಷ್ಟೆಲ್ಲಾ ಸಹಿಸಿಕೊಳ್ಳಲಾಗದೆ ಪ್ರಶ್ನಿಸಲು ಮುಂದಾದಾಗ ನನ್ನ ದೊಡ್ಡಪ್ಪನ ಮಗ ಮತ್ತು ಕುಟುಂಬದವರು ಮದುವೆ ಕಾರ್ಯದಲ್ಲಿ ಜಗಳ ಮಾಡಿ ತೊಂದರೆ ಮಾಡಬೇಡ ಎಂದು ಸುಮ್ಮನಿರಿಸಿ ಕರೆದುಕೊಂಡು ಬಂದರು.

ನಂತರ ಮನೆಗೆ ಬಂದಾಗ ಮೇಲೂ ಈ ಘಟನೆಯ ಬಗ್ಗೆ ಯೋಚಿಸುತ್ತಾ ಹಲವಾರು ಪ್ರಶ್ನೆಗಳು ಮನಸ್ಸಿಗೆ ಬರಲಾರಂಭಿಸಿದವು. ಇವುಗಳಿಗೆಲ್ಲಾ ಕೊನೆಯೇ ಇಲ್ಲವೇ? ಇಂದಿನ ಯುಗದಲ್ಲೂ ಎಂತಹ ಘೋರ ಆಚರಣೆಗಳು ನಡೆಯುತ್ತಿವೆ. ಮತ್ತು ಇವುಗಳನ್ನೆಲ್ಲಾ ನೋಡಿ ಏನೂ ಮಾಡಲಾಗದ ಸ್ಥಿತಿ ನೋಡಿ ನನಗೆ ನಾಚಿಕೆ ಎನಿಸಿತು. ಈ ಘಟನೆ ನಡೆದದ್ದು ಬಹಳ ಹಿಂದೇನಲ್ಲಾ ಕೇವಲ ಬಂದೂವರೆ ವರ್ಷಗಳ ಹಿಂದೆ.

ಇದು ಒಂದೂವರೆ ವರ್ಷಗಳ ಹಿಂದಿನ ಘಟನೆ ಆದರೆ ಎರಡು ತಿಂಗಳ ಹಿಂದಿನ ಘಟನೆಯೊಂದು ಹೀಗಿದೆ ನೋಡಿ. ನಮ್ಮ ಊರಿನಲ್ಲಿ ಒಂದು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶವಿರಲಿ, ದೇವರ ಮೇಲೆ ಅರಿಶಿನ ಅಕ್ಕಿ ಹಾಕಲೂ ಕೂಡ ಬಿಟ್ಟಿಲ್ಲ. ಹಾಗೆಯೇ ದೇವಸ್ಥಾನಕ್ಕೆ ಹಾಕಿರುವ ಚಪ್ಪರದ ಕೆಳಗೆ ದಲಿತರು ಹೋಗುವಂತಿಲ್ಲ. ಹಾಗೆಯೇ ಊಟಕ್ಕೆ ಪ್ರತ್ಯೇಕ ಸಾಲಿನಲ್ಲಿ ಕೂರಬೇಕಾದ ಸ್ಥಿತಿ ಈಗಲೂ ಕೂಡ ಇದೆ. ಈ ಘಟನೆ ನಂತರ ಈ ಅಸ್ಪøಶ್ಯತೆ ವಿರುದ್ಧ ದೂರು ದಾಖಲಿಸುವ ಪ್ರಕ್ರಿಯೆ ಕುರಿತಾಗಿ ವಿಚಾರಿಸಿರುತ್ತೇವೆ. ನನ್ನ ಕಾನೂನೂ ಸ್ನಾತಕೋತ್ತರ ಪರೀಕ್ಷೆಗಳು ಪ್ರಾರಂಭವಾಗಿರುವುದರಿಂದ ಮುಗಿದ ನಂತರ ಊರಿಗೆ ತೆರಳಿದಾಗ ದೂರು ದಾಖಲಿಸುವ ಯೋಚನೆಯನ್ನು ಹೋಂದಿರುತ್ತೇನೆ.

ಕಾನೂನೂ ಪದವಿಯ ನಂತರ ಕಾನೂನು ಸ್ನಾತಕೋತ್ತರ ಪದವಿಗೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಂಡಾಗ ಹಾಸ್ಟೆಲ್‍ನಲ್ಲಿರುತ್ತೇನೆ. ನನ್ನ ರೂಮಿನಲ್ಲಿ ನಾನೊಬ್ಬಳೆ, ಹಿಂದುಳಿದ ಜಾತಿಯವಳಾಗಿರುತ್ತೇನೆ. ನನ್ನ ರೂಮಿನ ಸ್ನೇಹಿತೆಯನ್ನು ಭೇಟಿ ಮಾಡಲು ಇದೇ ಹಾಸ್ಟೆಲ್ ಮತ್ತೊಬ್ಬ ಹುಡುಗಿ ಬಂದಳು. ಅವಳು ಹಾಗೆ ಮಾತನಾಡುತ್ತಾ ನಮ್ಮ ಊರಿನಲ್ಲಿ ಹಬ್ಬವಿದೆ ಎಲ್ಲಾ ಸ್ನೇಹಿತರನ್ನು ಮನೆಗೆ ಕೆರೆದೊಯ್ಯುತ್ತಿದ್ದೇನೆ. ಆದರೆ ಅದರಲ್ಲೊಬ್ಬಳು ಅಸ್ಪøಶ್ಯಳು ಅವಳನ್ನು ಕೆರದುಕೊಂಡು ಹೋಗುವುದೋ? ಬೇಡವೋ? ಎಂದು ಯೋಚಿಸುತ್ತಿದ್ದೇನೆ. ನಮ್ಮ ಮನೆಯಲ್ಲಿ ಅಸ್ಪøಶ್ಯರನ್ನು ಒಳಗೆ ಸೇರಿಸುವುದಿಲ್ಲ. ಈ ಮೊದಲು ದಲಿತಳೊಬ್ಬಳನ್ನು ಮನೆಗೆ ಕೆರದುಕೊಂಡು ಹೋಗಿದ್ದರಿಂದ ಮನೆಗೆ ಹಾವು-ಚೇಳು ಬರುತ್ತಿದ್ದವು. ನಂತರ ನಮ್ಮ ಅಮ್ಮ ದೇವರಿಗೆ ತಪ್ಪೊಪಿಗೆ ಕಾಣಿಕೆ ಸಲ್ಲಿಸಿದ ಮೇಲೆ ಹಾವ-ಚೇಳು ಬರುತ್ತಿಲ್ಲ ಎಂದು ಹೇಳುತ್ತಿದ್ದಳು. ಹಾಗೆ ಅವರ ಮನೆಯಲ್ಲೊಂದು ಪದ್ದತಿಯಿದೆಯಂತೆ, ಅದೆಂದರೆ ಸ್ನೇಹಿತೆರೊಂದಿಗೆ ಆ ಹುಡುಗಿ ಅವರ ಮನೆಗೋದರೆ ಮನೆಯಿಂದ ಹೊರಡುವ ಸಮಯದಲ್ಲಿ ಈ ಹುಡುಗಿ ಅವರ ಅಕ್ಕ ಮತ್ತು ಅಮ್ಮಗೆ ಸರಿ ಎನ್ನುವ ರೀತಿ ಸನ್ನೆ ಮಾಡಿದರೆ ಎಲ್ಲಾ ಸ್ನೇಹಿತರು ನಮ್ಮ ಜನಾಂಗದವರೆ ಎಂದು, ಮುಖ ಸಪ್ಪೆ ಮಾಡಿ ಇಲ್ಲ ಎಂದು ಸನ್ನೆ ಮಾಡಿದರೆ ಕೆಳಜಾತಿಯವರಿದ್ದಾರೆ ಎಂದರ್ಥವಂತೆ. ಈ ರೀತಿ ಇಲ್ಲ ಎಂದು ಸನ್ನೆ ಮಾಡಿದರೆ ಅವಳು ಮತ್ತು ಸ್ನೇಹಿತರು ಹಿಂತುರಿಗಿದ ಮೇಲೆ ಅವಳ ಮನೆಯ ಪ್ರತಿಯೊಂದು ಸಾಮಾನುಗಳನ್ನು ಸ್ಚಚ್ಛಗೊಳಿಸಿ, ಅವಳ ಕೆಳಜಾತಿ ಸ್ನೇಹಿತೆ ಮಲಗಲು ಉಪಯೋಗಿಸಿದ ಹಾಸಿಗೆ, ದಿಂಬು, ಹೊದಿಗೆ ಹಾಗೂ ಬಳಸಿದ ತಟ್ಟೆ, ಲೋಟಗಳೆಲ್ಲವನ್ನು ಗೋಮಾತ್ರದಿಂದ ಶುಚಿ ಮಾಡಿ, ಮನೆಗೆಲ್ಲಾ ಪುಣ್ಯ ಮಾಡಿಸಿ ತಪ್ಪೊಪ್ಪಿಗೆ ಕಾಣಿಕೆಯನ್ನು ದೇವರಿಗೆ ನೀಡಿ, ಕ್ಷಮೆ ಕೇಳುವ ಪದ್ಧತಿ ಇದೆಯಂದೆ. ಇದನೆಲ್ಲಾ ಕೇಳಿಸಿಕೊಂಡ ನನಗೆ ಅನಿಸಿತೆಂದರೆ ಅಸ್ಪøಶ್ಯ ಆಚರಣೆಗಳು ಮೇಲ್ನೋಟ್ಟಕ್ಕೆ ಅಥವಾ ಕಾನೂನೂ ಭಯಕ್ಕೋ ಹಿಂದಿನ ದಿನಗಳಿಗೆ ಹೋಲಿಸಿದರೆ ಕಡಿಮೆ ಎಂದು ಅನಿಸಿದರೂ ಇನ್ನೂ ಮೇಲುಜಾತಿಯವರ ಮನಸ್ಸುಗಳಲ್ಲಿ ಅಸ್ಪøಶ್ಯತೆ ಎನ್ನುವುದು ಆಳವಾಗಿ ಬೇರೂರಿದೆ. ಇಂತಹ ವಿಶ್ವವಿದ್ಯಾಲಯಗಳ ಮೆಟ್ಟಿದ ಪದವೀಧರರು ಎನಿಸಿಕೊಂಡವರಲ್ಲೇ ಇಂತಹ ಮನಸ್ಥಿತಿಗಳಿದ್ದರೆ ಇನ್ನು ಗ್ರಾಮೀಣ ಪ್ರದೇಶಗಳಲ್ಲಿರುವ ದಲಿತರ ಮನಸ್ಸುಗಳು ಅಲ್ಲಿಯ ಮೇಲು ಜಾತಿಯವರಿಂದ ಇನ್ನೆಂತಹ ಅಸ್ಪøಶ್ಯ ಅನುಭವಗಳನ್ನು ಸಹಿಸಿಕೊಳ್ಳತ್ತಿವೆಯೋ ಎಂಬುದನ್ನು ಊಹಿಸಿಕೊಳಲು ಕಷ್ಟವಾಗುತ್ತದೆ.

ಇವುಗಳೆಲ್ಲಾ ನನ್ನೊಬ್ಬಳಿಗಾದ ಅಸ್ಪøಶ್ಯತೆ ಅನುಭವಗಳಾದರೆ, ಇನ್ನೂ ಈ ಪ್ರಪಂಚದದಾದ್ಯಂತ ಇರುವ ಕೆಳ ಜನಾಂಕದವರು ಈಗಲೂ ಜಾತಿಯಿಂದ ಎಂತೆಂತಹ ಕಷ್ಟ, ಹಿಂಸೆಗಳನ್ನು ಅನುಭವಿಸುತ್ತಿದ್ದಾರೋ, ಇವುಗಳಿಗೆಲ್ಲಾ ಮುಕ್ತಿ ಸಿಗಬೇಕಾದೆಡೆಗೆ ನಾವು ಯೋಜಿಸಬೇಕಾದ ಅಗತ್ಯವಿದೆ.

ತಮ್ಮ ಇತೀ ಜೀವ-ಜೀವನವನೆಲ್ಲಾ ತನ್ನ ಜನಾಂಗಕ್ಕಾಗಿ ತ್ಯಾಗ ಮಾಡಿ ಅನಿಷ್ಟ-ಅಸಮತೋಲನನದಲ್ಲಿ ಸತ್ತಂತೆ ಬದುಕಿದ್ದ ಜನರ ಕೈ ಹಿಡಿದು ಎತ್ತಿ, ಹುದುಗಿಹೋಗಿದ್ದ ಆ ಎಲ್ಲಾ ನಿರ್ಗತಿಕ ದನಿಗಳಿಗೆ ಬಾಯಿಯಾದ ನುಣಪುರುಷರು, ಶೋಷಿತರ ಪಾಲಿನ ನಿಜವಾದ ದೇವರಾದ ಅಂಬೇಡ್ಕರ್‍ರವರಿಗೆ ನಾವಾದರೂ ಮಾಡಿದ್ದೇನು? ಮಾಡುತ್ತಿರುವುದೇನು? ಎಂಬ ಪ್ರಶ್ನೆ ಹಾಕಿಕೊಂಡಾಗ ತಲೆ ತಗ್ಗಿಸಬೇಕಾಗುತ್ತದೆ.

ನಮ್ಮ ನೋವು, ಅವಮಾನಗಳು ಅಂಬೇಡ್ಕರ್‍ವರಿಗೆ ಕಂಡಂತೆ ಅವರ ನೋವುಗಳೇಕೆ ನಮಗೆ ಕಾಣುತ್ತಿಲ್ಲ? ಎಂಬ ಪ್ರಶ್ನೆ ಹಾಕಿಕೊಳ್ಳುತ್ತಾ ಪ್ರತಿಯೊಬ್ಬರೂ ಸ್ಪಾರ್ಥವನ್ನು ತ್ಯಜಿಸಿ ಅಂಬೇಡ್ಕರ್‍ರವರ ಆಶಯ ಮತ್ತು ಕನಸನ್ನು ಈಡೇರಿಸುವ ಕಡೆಗೆ ಹೆಚ್ಚೆ ಇಡಬೇಕಾಗುತ್ತದೆ.  ಶೋಷಿತ ಸಮುದಾಯಗಳನ್ನು ಮೇಲೆತ್ತುವುದು ಮತ್ತು ಅಂಬೇಡ್ಕರ್ ರವರ ಬಹುದೊಡ್ಡ ಪಾತ್ರವನ್ನು ಎಲ್ಲರಿಗೂ ಮನದಟ್ಟು ಮಾಡುವುದೇ ನಮೆಲ್ಲರ ಆಶಯವಾಗಬೇಕಾಗುತ್ತದೆ.

~~~

Chaitra M G has an LLM from Bangalore University and is now practicing as an advocate in Bangalore.

3 Comments

  1. vinod says:

    ದಲಿತರಿಗೆ ಯಾವ ದೇವಸ್ಥಾನಗಳು ಪ್ರವೇಶ ನಿರಾಕರಿಸಿದ್ದು ಅಂತಹ ದೇವರುಗಳನ್ನು ಧಿಕ್ಕರಿಸುವುದು ಮೇಲು ಮತ್ತೆ ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ ಬೌದ್ಧ ಧರ್ಮಕ್ಕೆ ಪ್ರವೇಶ ಸೇರುವುದು ಮೇಲು ಬುದ್ಧನ ತತ್ವ ಸಹೋದರತ್ವ ಬಂಧುತ್ವ ಸಮಾನತೆಯಿಂದ ಕೂಡಿದ ಧರ್ಮ ಬೌದ್ಧ ಧರ್ಮ ದಲಿತ್ ದಲಿತರೆಲ್ಲ ಬೌದ್ಧ ಧರ್ಮಕ್ಕೆ ಸೇರಿಕೊಂಡು ಬಾಬಾ ಸಾಬ್ ಅಂಬೇಡ್ಕರ್ ಅವರು ಹೇಳಿರುವ ಮಾರ್ಗದಲ್ಲಿ ನಡೆಯುವುದು ಮೇಲು ಸ್ವಾಭಿಮಾನದಿಂದ ಸ್ವಾಭಿಮಾನದಿಂದ ಬದುಕಬೇಕು ಜೈಭೀಮ್ ಜೈ ಭಾರತ್

  2. Purushotham says:

    Best of luck your feature life sister

  3. Awdu kanditha sister jathi paddathi ennu ogilla dalitharagi uttiddu mahaha tappa

Leave a Reply

Your email address will not be published. Required fields are marked *

Protected by WP Anti Spam
facebook marketing